ಮುಂಜಾನೆ ಮಂಜಿನಲಿ ಮಿಂಚುವ ಮಣಿಮುತ್ತಿನ ಹನಿ ಇವಳು
ಸುಡುವ ಮರುಭೂಮಿಯ ಮಧ್ಯದ ನೀರಿನ ಚಿಲುಮೆ ಇವಳು
ಕಾಣದ ಕಗ್ಗತ್ತಲಿನಲೂ ಕಣ್ತೆರೆದು
ನೋಡುವಂತ ಕಳ್ಳಿ ಇವಳು
ಬೆಂಗಾಡಲೂ ಬಾಡದೆ ಬಳುಕುತ ಬೆಳೆಯುವ ಬಳ್ಳಿ ಇವಳು
ಕರಿ ಕಾರ್ಮೋಡದ ನಡುವೆಯೂ ಮಿಂಚುವ ಕೋಲ್ಮಿಂಚು ಇವಳು
ತಂಪಾದ ಬೆಳದಿಂಗಳಲಿ ಇಂಪಾಗಿ ಹಾಡುವ ಕೋಗಿಲೆ ಇವಳು
ಭವ ಸಾಗರದ ಸುಳಿಯಲೂ ಸರಾಗವಾಗಿ ಸಾಗುವ ಸಂಗಾತಿ ಇವಳು
ದುಗುಡ ದುಮ್ಮಾನಗಳ ದೂರವಾಗಿಸಿ ದಾರಿತೋರುವ ಬಾಳ ದೀವಿಗೆ ನನ್ನವಳು
🔆🔆🔆 ✍️<strong>ಶ್ರೀ.ವಿರೇಶ ಗಣಾಚಾರಿ,ರಾಮದುರ್ಗ</strong>