ನಾವು ಆಕಾಶಕೂ ಢಿಕ್ಕಿ ಕೊಟ್ಟುಕೊಂಡಿದ್ದೆವು ಏನೂ ಆಗಿರಲಿಲ್ಲ
ಎದೆಗಾದ ಗಾಯ ನೋಡಿಕೊಂಡಿದ್ದೆವು ಇನ್ನೂ ಮಾಗಿರಲಿಲ್ಲ
ಹೂ ಹಣ್ಣು ಕಾಯಿ ಎಲ್ಲ ತಂದಿದ್ದೆವು ಎದುರಾಗುವ ಸಂದಿಗ್ಧ ಗೊತ್ತಿರಲಿಲ್ಲ
ನಾವು ನಮ್ಮಣೆಗೂ ಮುಟ್ಟಿ ನೋಡಿಕೊಂಡಿದ್ದೆವು ಅಂಥದೇನೂ ಜರುಗಲಿಲ್ಲ
ಯಾರೋ ಹೇಳಿದರು ಭೂಮಿ ಏನೇನೂ ಭಾರವಲ್ಲವೆಂದು
ಮಣ್ಣಲಿ ಕುಸ್ತಿ ಮೈಗೆ ಸುಸ್ತಿ ಮಾಡಿಕೊಂಡಿದ್ದೆವು ಹುಲ್ಕಡ್ಡಿನೂ ಸರಿಸಲಾಗಲಿಲ್ಲ
ನಾವು ಕಾಲಿಡುವವರೆಗೂ ಇಲ್ಲಿ ಏನಿತ್ತೋ ಗೊತ್ತಿಲ್ಲ ಬರಿಕತ್ತಲು
ಆದರೆ ನಾವಿಲ್ಲಿ ಪರಿಚಯವಾಗಿ ಬೆರೆತುಕೊಂಡಿದ್ದೆವು ಆತ್ಮೀಯತೆಯಿನ್ನೂ ಬೆಳೆಯಲಿಲ್ಲ
ಏನೋ ಆಗುತ್ತದೆ ಏನೋ ಆಗಬಹುದು ಎಂಬ ನಿರೀಕ್ಷೆಗಳ ಸುತ್ತ ಚಿತ್ತ
ಎಷ್ಟು ಗಿರಗಿಟ್ಲೆಯಾಡಿದರೂ ಸಹಿಸಿಕೊಂಡಿದ್ದೆವು “ಜಾಲಿ ” ಮಂಕುತನವಿನ್ನೂ ತಿಳಿಯಾಗಲಿಲ್ಲ
🔆🔆🔆
✍️ ವೇಣು ಜಾಲಿಬೆಂಚಿ,ರಾಯಚೂರು.