ಪ್ರೀತಿ ಹೃದಯದ ಆಳದಲಿರುವುದು ಹೇಗೆ ತೋರಿಸಲಿ
ಅಸಲಿತನ ಅಂತರಾಳದಲಿರುವುದು ಹೇಗೆ ತೋರಿಸಲಿ

ಮೇಲುನೋಟವ ನೋಡಿ ತೂಗಬಹುದೆ ಗುಣಮಟ್ಟ
ಚಿನ್ನ ಧರಣಿಯೊಡಲಲಿರುವುದು ಹೇಗೆ ತೋರಿಸಲಿ

ಎರಡು ಕಣ್ಣುಗಳಿಂದ ನೋಡಬಲ್ಲೆವೆ ಅಂತರಾತ್ಮ?
ಸಿರಿ ಸೃಷ್ಟಿಗರ್ಭದಲಡಿಗಿರುವುದು ಹೇಗೆ ತೋರಿಸಲಿ

ಅಳತೆ ತಟ್ಟೆಗೆ ಬೊಕ್ಕೆ ಮಾಡುವುದು ವ್ಯಾಪಾರವೆ?
ಮನುಷ್ಯತ್ವ ಕರುಳಿನಲಿರುವುದು ಹೇಗೆ ತೋರಿಸಲಿ

ಕೊಲುವ ಮಾತುಗಳಿಗಿಲ್ಲಿ ಬಿರುದು ಬಾವಲಿಗಳು
“ಜಾಲಿ” ನಿನ್ನೊಳು ನಾನಿರುವುದು ಹೇಗೆ ತೋರಿಸಲಿ‌ ‌‌‌‌‌

            🔆🔆🔆

✍️ವೇಣು ಜಾಲಿಬೆಂಚಿ,‌ ರಾಯಚೂರು.