ಅವಳ ನೆನಪ ಬಳ್ಳಿಯಲಿ
ನೂರೆಂಟು ಮಲ್ಲಿಗೆ ಅರಳುತ್ತವೆ
ಈಗ
ನಾಳೆ, ಸಾಯುವ ಮುನ್ನ
ಏನು ಮಾಡಿದೆ ಎಂದು
ಕೇಳಬಾರದಲ್ಲವೆ
ಅದಕೆ
ನನ್ನ ವಿರಹವ ಸುರಿದೆ..

ನಿನ್ನೆ ದೂರವೇ ನಿಂತಿದ್ದ
ಸಂಜೆಯನ್ನು
ಇಂದು ನಾನೇ ಕೈ ಹಿಡಿದು
ತಂದಿದ್ದೇನೆ
ನನ್ನ ಅಂಗಳಕ್ಕೆ
ಅವಳಿಗೆ ದೀಪ ಹಚ್ಚುವುದೆಂದರೆ
ಎಲ್ಲಿಲ್ಲದ ಖುಷಿ..

ಗೊರಂಟಿ ಗಿಡದ
ಎಲೆಗಳನೆಲ್ಲ
ಆಗಲೇ
ನೆನೆಸಿಟ್ಟಿದ್ದೇನೆ
ಇಲ್ಲೇ ಈ ಕಟ್ಟೆಯ ಮೇಲೆ
ಕುಳಿತೇ,
ಹಾಕಬೇಕು ಅವಳಿಗೆ..

ಅರೆ,
ಮರೆತೆಬಿಟ್ಟೆ
ನಿನ್ನೆ ಕವಿತೆಯೊಂದನ್ನು
ಅರ್ಧಕ್ಕೇ ನಿಲ್ಲಿಸಿಬಿಟ್ಟಿದ್ದೆ
ಅವಳು ಕೇಳುತ್ತಿದ್ದಿದ್ದರೆ
ಎಲ್ಲ ಹೇಳುತ್ತಿದ್ದೆ ಎಂದು..

      ‌    🔆🔆🔆                             ✍️ಚೇತನ್ ನಾಗರಾಳ ಬೀಳಗಿ