ಕನಸಲ್ಲೂ ಯೋಚಿಸಿರಲಿಲ್ಲ ನೀನು ಮೋಸ ಮಾಡಬಹುದೆಂದು
ಎಂದೂ ಊಹಿಸಿರಲಿಲ್ಲ ಮೋಸ ಮಾಡಬಹುದೆಂದು

ನನ್ನ ಮಗಳಂತೆ ನಿನ್ನ ಪ್ರೀತಿ ಎಂದು ಆಣೆ ಮಾಡಿದ್ದು ನೆನಪಿದೆಯೇ
ಎದೆಯ ಬಡಿತಕೂ ತಿಳಿದಿರಲಿಲ್ಲ ನೀನು ಮೋಸ ಮಾಡಬಹುದೆಂದು

ಏಕಾಂತದಲಿ ಉಸುರಿದ್ದೆ ನನ್ನ ಹೊರತಾಗಿ ಬದುಕಿನ ಗಜಲ್ ಅರಳುವುದಿಲ್ಲವೆಂದು
ಹಾಯಿ ಇರದೆ ಮುಳುಗುವ ಬದುಕಿಗೆ ಅರಿವಿರಲಿಲ್ಲ ನೀನು ಮೋಸಮಾಡಬಹುದೆಂದು

ನನ್ನ ಹೆಸರೇ ನೀನಾಗಿರುವಾಗ ಹೆಸರನ್ನೇ ಕೆಡಿಸುವ ಹುನ್ನಾರವೇಕೆ
ಎಚ್ಚರಿಸಿದ ಯಾರ ಮಾತನ್ನೂ ನಂಬಿರಲಿಲ್ಲ ನೀನು ಮೋಸ ಮಾಡಬಹುದೆಂದು

ಯಾವ ತಪ್ಪಿಗೆ ಅರಗಿಸಿಕೊಳ್ಳಲಾಗದಂತಹ ಇಂತಹ ಶಿಕ್ಷೆ ನೀಡಿದೆ ನೀನು?
ಸಾಯುವ ಸಮಯಕೂ ಬಯಸಿರಲಿಲ್ಲ ನೀನು ಮೋಸ ಮಾಡಬಹುದೆಂದು

ನನ್ನ ಮೇಲೆ ಅದಾವ ಜನ್ಮದ ದ್ವೇಷವಿತ್ತು ನಿನಗೆ ಹೀಗೆ ಬಳಸಿ ಬಿಸಾಡಲು
ದೇಹದ ಯಾವ ಕಣವೂ ಅಂದುಕೊಂಡಿರಲಿಲ್ಲ ನೀನು ಮೋಸ ಮಾಡಬಹುದೆಂದು

ಮೋಸಕ್ಕೂ ಮೊಸ ಕಲಿಸಿದ
ಮಹಾನ್ ಗುರು ನೀನು
ಮನದ ನೋವ ಉಸಿರಿಗೂ ಹೇಳಿರಲಿಲ್ಲ ನೀನು ಮೋಸಮಾಡಬಹುದೆಂದು

ಸಿರಿ, ಜೀವನವಿಡಿ ದೂರ ಮಾಡದೇ ಜೊತೆಗೆ ಹೆಜ್ಜೆಯಿಡುವ ವಚನವಿತ್ತುಭವಿಷ್ಯದ ಕನಸಲ್ಲಿ ಅರೆ ಕ್ಷಣವೂ ಅನಿಸಿರಲಿಲ್ಲ ನೀನು ಹೀಗೆ ಮೋಸ ಮಾಡಬಹುದೆಂದು

               🔆🔆🔆

✍️ ಶ್ರೀದೇವಿ ಕೆರೆಮನೆ, ಉತ್ತರ ಕನ್ನಡ ‌