(1)
ಒಪ್ಪಿಕೊಳ್ಳುವುದೇ ಪ್ರೀತಿ
ವ್ಯಾಖ್ಯಾನವಾದರೂ
ಮೆಚ್ಚಿದವರ ಒಪ್ಪಿಸಲು ಬದಲಾಗುವುದು
ಪ್ರೇಮಿಗಳ ರೀತಿ

(2)
ಬರಿಯ ಹೊಟ್ಟೆಗಷ್ಟೇ ಅಲ್ಲ
ಇಲ್ಲಿ ಕಣ್ಣಿಗೂ ಹಸಿವು;
ಒಸರುವ ಕಣ್ಣೀರ ಹರಿಯಗೊಡದೆ
ತಾನೆ ನುಂಗಿ ನೀರು ಕುಡಿದು ಬಿಡುತ್ತದೆ
ಉಳಿಸದಂತೆ ತುಸುವೂ

(3)
ಲೋಕದ ವ್ಯಾಪಾರದ ಹೊರತಾಗಿಯೂ
ಕೆಲವೊಂದು ಸರಕುಗಳು ಎದಯೊಳಗೆ
ಉಳಿದು ಬಿಡಲಿ;
ಸುಮ್ಮನಿದ್ದಾಗ ನೆನಪಾಗಲು
ನಗುವಿಗೊಂದು ನೆಪವಾಗಲು
*******
—- ನಂದಿನಿ ವಿಶ್ವನಾಥ ಹೆದ್ದುರ್ಗ