ಇರುಳಲ್ಲಿ ಕಂಡ ಕನಸು ಬಹಳಷ್ಟು
ಹಗಲಲ್ಲಿ ನನಸಾಗುವುದು ಒಂದಿಷ್ಟು
ಕಾಣುವ ಕನಸಿಗೆ ನೂರಾರು ಹಾದಿಗಲ್ಲು
ಎದುರಿಸಲು ಮಾಡಬೇಕು ಹೃದಯ ಕಲ್ಲು
ಕನಸಿನ ಬೀಜ ಬಿತ್ತಿ ಬೆಳೆದು ನನಸಾದರೆ
ಬಾಳು ಸದಾ ಸಂತಸ ಸಂಭ್ರಮದ ಕೈಸೆರೆ
ಕಂಡ ಕನಸುಗಳೆಲ್ಲ ನುಚ್ಚು ನೂರಾದರೆ
ಕಣ್ತುಂಬಾ ತುಂಬುವುದು ಕಣ್ಣೀರ ಧಾರೆ
ಕಾಣಲು ಇಷ್ಟವಿಲ್ಲ ನನಸಾಗದ ಕನಸು
ಸಾಕೆನೆಗೆ ಈ ಬಾಳಲಿ ನಿನ್ನ ಮುನಿಸು
ಆ ನಿನ್ನ ಮುನಿಸಿನಲಿದೆ ನನಗಾಗಿ ಪ್ರೀತಿ
ಇಂದು ನಾ ತಿಳಿದೆ ನಿನ್ನ ಪ್ರೀತಿಯ ರೀತಿ
*********
—— ಶ್ರೀಮತಿ ಸುಧಾ ಕಂದಕೂರ.
ಹುಬ್ಬಳ್ಳಿ
ನಿಮ್ಮೆಲ್ಲ ಕನಸು ನನಸಾಗಲಿ
LikeLike
ಧನ್ಯವಾದಗಳು ಸರ್… 😊🙏
LikeLike