ಅಪ್ಪ ನನ್ನ ಪ್ರೀತಿಯ ಅಪ್ಪ
ಅಪ್ಪ ನನ್ನ ಹೆಮ್ಮೆಯ ಅಪ್ಪ |ಪ|
ಅಪ್ಪ ನಮ್ಮ ಅರಮನೆಯ ಯಜಮಾನ
ಮೊಗದಲಿ ತೋರುವೆ ಕೊಂಚ ಬಿಗುಮಾನ
ಕೇಳಲು ಬಯಸುವೆ ನಮ್ಮಯ ಗುಣಗಾನ
ಮನೆಯವರ ಚಿಂತೆಗೆ ನೀವೆ ಸಮಾಧಾನ||
ಈ ಹೆಸರಿಗೆ ನೀ ಸುರಿಸಿದ ಬೆವರು ಕಾರಣ
ಕಷ್ಟ ತೋರದೇ ಸಾಗಿಸಿದೆ ಜೀವನ ಪಯಣ
ನಿಮ್ಮ ಹಿತ ನುಡಿಗಳೇ ಬಾಳಿಗೆ ಹೊಂಗಿರಣ
ಕಲಿಸಿದ ಸಂಸ್ಕೃತಿಯೇ ಬಾಳಿಗೆ ಹೂರಣ||
ಹಬ್ಬಕ್ಕೆ ಮನೆಯವರಿಗೆಲ್ಲ ಬಟ್ಟೆ ಕೊಡಿಸಿದೆ ನೀ ಎನೂ ಕೊಳ್ಳದೇ ಸಂಭ್ರಮ ನೋಡಿದೆ ನಮ್ಮೆಲ್ಲರ ಬಯಕೆಗಳನ್ನೆಲ್ಲ ಈಡೇರಿಸಿದೆ ನಿನ್ನ ಆಸೆಗಳನ್ನ ನಮ್ಮಿಂದಮರೆಮಾಚಿದೆ
ನಿನ್ನೊಳಗಿನ ಪ್ರೀತಿ ಯಾರಿಗೂ ಕಾಣದು
ನಿನ್ನಯ ಕೋಪವು ಬಲು ದೂರ ಸಾಗದು ನೀವು ಪಟ್ಟಶ್ರಮ ಎಂದಿಗೂ ಸೋಲದು ನಿನ್ನ ಹೊಗಳಲು ಪದಪುಂಜಗಳು ಸಾಲದು|
*******
-ಶ್ರೀಮತಿ ಸುಧಾ ಕಂದಕೂರ. ಹುಬ್ಬಳ್ಳಿ
