ಯಾಕೋ ತಲಿ ಕೆಡಿಸ್ಕೊತಿ ಹುಚ್ಚಪ್ಪ ,

ನೀ ಇರೋದು ಮೂರ ದಿನ ನನ್ನಪ್ಪ.

ಕಟ್ಟಾಕ ಹೊಂಟಿ ಅರಮನಿ,

ಕೋನಿಗ್ ಹೋಗ್ತ ಮಣ್ಣಿನ ಮನಿ.

ಆಸಿ ಇರಬೇಕು ಮನ್ ಸಂಗ,

ಅತಿ ಆಗ್ಬಾರ್ದು ಯಾವುದ್ರಗ

ಹೋಗೋದ್ ಹೋಗ್ತಿ ನಿಂದೇನೈತಿ.

ಕೊಟ್ಟು ಹೋಗೋ ಹುಚ್ಚಪ್ಪ,

ಮುಚಿಡಬ್ಯಾಡ ನನ್ನಪ್ಪ.

ನೀ ಅನ್ಕೊಂಡಿ ಎಲ್ಲಾ ನಿಂದಂತ,

ಅದು ನಿನ್ನ ಭ್ರಮೆಯಂತ.

ಹುಚ್ಚು ದಾಸಪ್ಪ ಹಾಡ್ತಾನಾ ಅನ್ಕೋಬೇಡ

ಶಿವ ನುಡಿಸಿದ್ದು ನುಡಿತೀನಿ ನೋಡ.

*****

                                      —– ಶ್ರೀಮತಿ ಅಶ್ವಿನಿ ಆನಂದ ಮಠದ,

                                                                                    ಹುಬ್ಬಳ್ಳಿ.