ಎಲ್ಲಾ ಮಾಯೆ ಜಗದಲ್ಲಿ
ನಾನು ಯಾರು?
ಕೊಳ್ಳೆ ಹೊಡೆವ ಮೋಹದಲ್ಲಿ
ನಾನು ಯಾರು?
ಸಿಳ್ಳೆ ಹಾಕಿ ಕೂಗುತಿರುವರು
ನಾನು ಯಾರು?
ಸುಳ್ಳೇ ಪುಳ್ಳೆ ನೆವ ನೀಡಿ ಕಳಚಿಕೊಳ್ವೆ
ನಾನು ಯಾರು?
ಮಳ್ಳ ಮಾಡಿ ಹೋಗ್ವರಿಲ್ಲಿ
ನಾನು ಯಾರು?
ಭಂಡ ಜನರು ಊರು ತುಂಬಾ ಹಾಗಾದರೆ
ನಾನು ಯಾರು?
ಹೆಸರಲ್ಲಿ ಏನಿದೆ ಯಕ್ಷ ಪ್ರಶ್ನೆ ಕಾಡಿದೆ
ನಾನು ಯಾರು?

**********

                                                                                  -ಶ್ರೀಮತಿ. ಅಶ್ವಿನಿ ಆನಂದ ಮಠದ                                                                             ಹುಬ್ಬಳ್ಳಿ