ನೀಲಿ ಬಾನಂಗಳದಲ್ಲಿ ಚೆಂದಿರ
ಇರುಳಿಗೆ ಬೆಳ್ಳಿಯ ಮುಕುಟ
ಫಳಫಳ ಹೊಳೆಯುವ ಸ್ಪಟಿಕ
ಸುತ್ತಲು ತಾರೆಗಳ ಭದ್ರ ಕೋಟೆ ನಡುವೆ ನಗುವ ವಜ್ರದ ಮೂಟೆ ಹಾಲಿನಂತ ಬೆಳಕು ಭುವಿಯಲಿ
ಸಂಭ್ರಮದ ಬನದ ಹುಣ್ಣಿಮೆಯಲಿ
ಅಮ್ಮ ತೋರಲು ಸೋಮನ ಕಂದಗೆ ಊಟವು ಸೇರಿತು ಆಗ ಹೊಟ್ಟೆಗೆ ಹೊನಲಿನ ರಮ್ಯ ಹತ್ತಿಯ ರಂಗೋಲಿ ಅವನೊಡನೆ ಮಕ್ಕಳಿಗೆ ಆಟದ್ದೆ ಖಯಾಲಿ
ಕವಿತೆಯು ಮೂಡಿತು ಖಾಲಿ ಕಾಗದದಲಿ
ಸಂಗೀತ ಸೇರಿತು ಭವ್ಯ ನಿಸಗ೯ದಲಿ ಪ್ರೇಮಿಗೆ ಪ್ರೇಮವ ಓಲೈಸುವ ಕಾತುರ ಕಲಾವಿದನಿಗೆ ಬಣ್ಣ ಬಳಿವ ಆತುರ
ಬೆಣ್ಣೆ ಮುದ್ದೆ ಆಗಸ ಮಜ್ಜಿಗೆಯಲಿ ಸಹಸ್ರ ಮುತ್ತಿನ ಚಂಡು ನಭದಲಿ ಹಗಲಲಿ ಮರೆಯಾದ ಮಹಾಮಳ್ಳ
ರಾತ್ರಿಯಲಿ ಮನಸ್ಸುಗಳ ಕದ್ದ ಕಳ್ಳ
******** —- ಶ್ರೀಮತಿ.ಸವಿತಾ ಲಿಂಗಾರೆಡ್ಡಿ ಹುಬ್ಬಳ್ಳಿ