ನೆಮ್ಮದಿ

ನಾನು ಬಟ್ಟೆ ಬದಲಾಯಿಸಿದ್ದೇನೆ
ಮನೆ ಬದಲಾಯಿಸಿದ್ದೇನೆ
ಊರು ಬದಲಾಯಿಸಿದ್ದೇನೆ
ಸ್ನೇಹಿತರನ್ನು ಬದಲಾಯಿಸಿದ್ದೇನೆ
ಸಂಬಂಧಗಳನ್ನು ಬದಲಾಯಿಸಿದ್ದೇನೆ
ಆದರೂ “ನೆಮ್ಮದಿ‌ “ಇಲ್ಲ !
ಆಗ ಅಂತರಾತ್ಮ ಹೇಳಿತು
“ಮೊದಲು ನೀನು‌ ಬದಲಾಗು” 

 ಬಂಜೆ
“ಬಂಜೆ” ಎಂದು ಕರೆದರು
ಊರ ಜನರೆಲ್ಲ  ಅವಳನ್ನು
ಬಾಗಿಲಬಳಿ ನಿಂತು
ಭಿಕ್ಷುಕನೊಬ್ಬ ಕರೆದನು
” ಅಮ್ಮಾ‌” ಎಂದು ಅವಳನ್ನು
***********
                    ಶ್ರಿ ಆರ್.ಎಮ್.ಗೋಗೇರಿ
            ಹುಬ್ಬಳ್ಳಿ