ಉತ್ತರಕೆ ಹಿಂದುಸ್ತಾನಿಯಾದರೆ
ಕರುನಾಡ ಹೆಸರಲೇ ಸಂಗೀತದೆತ್ತರ ವಿಶ್ವದಲ್ಲಿರದ ಕಲ್ಲುಕಲ್ಲಿನಲೂ ಸಪ್ತಸ್ವರ ಏಳುವ ಹಂಪೆಯ ಚಮತ್ಕಾರ
ಪುರಾತನಕೆ ಪಾಮರವಲ್ಲವಾದರೂ ಕನ್ನಡಕ್ಕಿದೆ ಇತಿಹಾಸ ಎರಡುಸಾವಿರ ಉತ್ತರ-ದಕ್ಷಿಣ ಸಾಹಿತ್ಯಕೆ ಸಂವಾದಿಯಾಗಿ ಮಿಕ್ಕುಳಿವ ಭಂಡಾರ
ಕರುನಾಡಿದು ಕ್ಷೀರ ಕನಕ ಗಣಕ ಶ್ರೀಗಂಧ ಚಹಾ ಕಾಫಿಗಳಿಗೆ ಮುಂಚೂಣಿ ಸ್ಥಾನ
ಲೋಹದಿಂದ ಸೊಪ್ಪು ಸಾಂಬಾರ ಸವಿಸಕ್ಕರೆ ಸಿಧಾನ್ಯಗಳಿಗೆಲ್ಲ ಪೈಪೋಟಿ
ಸ್ಥಾನ
ಸಾಗರ ಸಹ್ಯಾದ್ರಿ ಜಲಪಾತ ಬಯಲುಸೀಮೆ ಯಾಣಗಳಗಂತಹ ಬಹುಮುಖಿ ನೆಲೆಯ ರಮಣೀಯ ತಾಣ
ಆದರೇನುಬಂತು ಸುಲಭವಾಗಿ ಸಿಗಲಿಲ್ಲ ಶಾಸ್ತ್ರೀಯ ಸ್ಥಾನಮಾನ. ಸಾಕುಬೇಕೆನಿಸುವಷ್ಟಿದ್ದರೂ ಹೋರಾಟವಿರದಿದ್ದರೆ ಹೀಗೆಯೇ ನಮಗೆ ದು:ಖ ದುಮ್ಮಾನ
ಕನ್ನಡ ಮಣ್ಣಿದು ರಾಜಪ್ರಭುತ್ವದ ಅರಸೊತ್ತಿಗೆ ಶರಣ-ದಾಸ ಸಂತರ ತಾಣ
ಅನುಭವ ಮಂಟಪದಲ್ಲಿ ಅಂದೇ ಮೂಡಿತ್ತು ಪುರಾತನ ಪ್ರಜಾಪ್ರಭುತ್ವದ ತಾಣ
ಕಾಯಕವೇ ಕೈಲಾಸವೆಂದ ಶರಣರಿಂದ ಅದು ಅಂದೇ ಕಮಿನಿಸ್ಟ್ ಜ್ಞಾನ-ವಿಜ್ಞಾನ ಕನ್ನಡಿಗನೇ ಇರಲಿ ನಿನಗೆ ಕಿಂಚಿತ್ತಾದರೂ ಕನ್ನಡ ಅಭಿಮಾನ ಸೂರ್ಯ ಬೆಳಗುವ ಬಹುಕೋಟಿ ವರುಷಗಳು ಭುವನೇಶ್ವರಿ ಯಾಗಿರಲಿ ವಿರಾಜಮಾನ
🔆🔆🔆
✍️ ಶ್ರೀ ರಮೇಶ್ ಹುಲಕುಂದ
ಕನ್ನಡ ಸಹಾಯಕ ಪ್ರಾಧ್ಯಾಪಕರು ಸಪ್ರದಕಾಲೇಜು, ಇಲಕಲ್