ಶ್ರಾವಣ

ಜೀವ ಭಾವಗಳ‌ ಸಮ್ಮಿಲನ

ಶ್ರಾವಣ ಬ್ಲಾಗ್ ಬಗ್ಗೆ

ಶ್ರಾವಣ”ಇದುಸಾಹಿತ್ಯ,ಕಲೆ,ಸಂಗೀತ, ವಿಜ್ಞಾನ&ತಂತ್ರಜ್ಞಾನ, ವೈದ್ಯಕೀಯ ಹಾಗೂ ಇತರ ಜ್ಞಾನ ಶಿಸ್ತುಗಳಿಗೆ ಸಂಬಂಧಿಸಿದ ಸೃಜನಶೀಲ ಹಾಗೂ ಸಂಶೋಧನಾತ್ಮಕ, ಮಾಹಿತಿದಾಯಕ ಬರಹಗಳ ಪ್ರಕಟಣೆಗಾಗಿ ಸೃಜಿಸಲಾದ ಬ್ಲಾಗ್ಆಗಿದೆ. ವರಕವಿ, ಶ್ರಾವಣದ ಕವಿ ಡಾ.ದ.ರಾ. ಬೇಂದ್ರೆಯವರ 125ನೇ ಜನ್ಮದಿನಾಚರಣೆಯ ವರ್ಷದ ಸುಸಂದರ್ಭದಲ್ಲಿ ಈ ಬ್ಲಾಗ್ ಪ್ರಾರಂಭಿಸಲಾಗಿದ್ದು ಅವರ ಗೆಳೆಯರ ಗುಂಪಿನ ಪರಿಕಲ್ಪನೆಯಿಂದ ಪ್ರೇರಿತವಾಗಿದೆ‌. ಕಾಲಕ್ಕೆ ತಕ್ಕಂತೆ ನಮ್ಮ ಸೃಜನಶೀಲತೆ, ಚಿಂತನೆ, ಭಾವನೆ, ಬರಹಗಳ ಅಭಿವ್ಯಕ್ತಿಯ ಮಾಧ್ಯಮಗಳೂ ಕೂಡ ಬದಲಾಗಬೇಕಾದ ಅಗತ್ಯವಿದೆ. ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಮಿತ್ರರು,ಆತ್ಮೀಯರು, ಸಹೃದಯಿಗಳು ಹಾಗೂ ಪ್ರತಿಭಾವಂತರು ತಮ್ಮ ಬರಹ, ಚಿಂತನೆ,ಕಲೆಗಳನ್ನು ಅಕ್ಷರರೂಪದಲ್ಲಿ ಅಥವಾ ಆಡಿಯೋ ವಿಡಿಯೋ ರೂಪದಲ್ಲಿ ಅಭಿವ್ಯಕ್ತಗೊಳಿಸಿದಾಗ ಅದನ್ನು ಆಸಕ್ತ ಮನಸ್ಸುಗಳಿಗೆ ತಲುಪಿಸಬೇಕು ತನ್ಮೂಲಕ ಈ ಸಂಭ್ರಮ ಸಂತಸವನ್ನು ಎಲ್ಲರೂ ಸವಿಯಬೇಕು ಎಂಬ ಉದ್ದೇಶದಿಂದ ಈ ಬ್ಲಾಗ್ ಪ್ರಾರಂಭಿಸಲಾಗಿದೆ.ಇದಕ್ಕೆಲ್ಲ ಬೆಂಬಲಿಸಿದ ಸಮಾನಮನಸ್ಕರ ಸ್ನೇಹಿತರು, ಹಿತೈಶಿಗಳಿಗೆ ಕೃತಜ್ಞತೆಗಳು. ಎರಡುಸಾವಿರ ಇತಿಹಾಸವಿರುವ ಕನ್ನಡ ಭಾಷೆ , ಸಾಹಿತ್ಯ ಹಾಗೂ ಕನ್ನಡನಾಡಿಗೆ ಈ “ಶ್ರಾವಣ” ಕೂಡ ಅಳಿಲು ಸೇವೆ ಸಲ್ಲಿಸುವ ಅಭಿಲಾಷೆ ಹೊಂದಿದ್ದು ಸಹೃದಯಿ ಮನಸ್ಸುಗಳು ವಿಶಾಲ ಮನಸ್ಸಿನೊಂದಿಗೆ ಸ್ವೀಕರಿಸಿ, ಬೆಂಬಲಿಸಿ, ಪ್ರೋತ್ಸಾಹಿಸಲು ಕೋರುತ್ತೇವೆ.

✍️ ರವಿಶಂಕರ ಗಡಿಯಪ್ಪನವರ. ಹುಬ್ಬಳ್ಳಿ

🔆🔆 🔆 🔆🔆🔆🔆🔆🔆🔆🔆🔆

%d bloggers like this: