ಡಾ.ಮೈತ್ರಾಯಿಣಿ ಗದಿಗೆಪ್ಪಗೌಡರ

ಕವಯಿತ್ರಿ ಹಾಗೂ ಸಾಹಿತಿ ಶ್ರೀಮತಿ ಮೈತ್ರಾಯಿಣಿ ಗದಿಗೆಪ್ಪಗೌಡರ ಮೇಡಮ್ ರವರು ಮೂಲತ: ಹುಬ್ಬಳ್ಳಿಯವರಾಗಿದ್ದು ಪ್ರಸ್ತುತ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದು, ನೂರಾರು ಪಾಂಡಿತ್ಯಪೂರ್ಣ ಉಪನ್ಯಾಸಗಳನ್ನು ನಾಡಿನಾದ್ಯಂತ ನೀಡಿರುತ್ತಾರೆ. ಹಲವಾರು ಪ್ರಮುಖ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದು, ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಮಹಿಳಾ ಸಾಹಿತ್ಯ ಸಮಾವೇಶಗಳ ಅಧ್ಯಕ್ಷರಾಗಿ ಸನ್ಮಾನಿಸಲ್ಪಟ್ಟಿದ್ದಾರೆ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಇವರ ಕವಿತೆಗಳು ಹಾಗೂ ಲೇಖನಗಳು ಪ್ರಕಟಗೊಂಡಿವೆ. ವಿವಿಧ ಸಂಘಟನೆಗಳು ಹತ್ತಾರು ಪ್ರಶಸ್ತಿ ಕೊಟ್ಟು ಗೌರವಿಸಿವೆ.ಇವರು ನಮ್ಮ ಶ್ರಾವಣ ಬ್ಲಾಗ್ ನ ಹೆಮ್ಮೆಯ ಗೌರವ ಸಲಹೆಗಾರರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಶ್ರೀ ಪ್ರಕಾಶ ಕಡಮೆ

ಶ್ರೀ ಪ್ರಕಾಶ ಕಡಮೆಯವರು ಮೂಲತ: ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿ ಕಡಮೆಯವರು. ಇವರುಸರಕಾರದ ಲೆಕ್ಕಪತ್ರ ಇಲಾಖೆಯ ಅಧಿಕಾರಿಯಾಗಿದ್ದು ಈಗ ವಯೋನಿವೃತ್ತಿ ಹೊಂದಿದ್ದಾರೆ. ಇವರು ಉತ್ಸಾಹಿ ಕವಿಗಳು ಹಾಗೂ ಸಾಹಿತಿಗಳಾಗಿದ್ದು, ಹಲವಾರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ಉತ್ತರ ಕನ್ನಡದಿಂದ ಪ್ರಸಾರವಾಗುವ ಕಡಲವಾಣಿ ದಿನಪತ್ರಿಕೆಯಲ್ಲಿ ಇವರು ” ಕಡಲಲ್ಲಿ ಕಡಮೆ” ಎಂಬ ಅಂಕಣವನ್ನು ಬರಎಯುತ್ತಿದ್ದಾರೆ. ನಮ್ಮ ಶ್ರಾವಣ ಬ್ಲಾಗ್ ನಲ್ಲಿ ಇವರು ಪ್ರೀತಿಯಿಂದ ಅಂಕಣವನ್ನು ಬರೆಯುತ್ತಿದ್ದು ಅದರ ಹೆಸರು ” ಕಡಮೆಯ ಒಡಲು”. ಕನ್ನಡದ ಹೆಸರಾಂತ ಕಥೆಗಾರ್ತಿ ಶ್ರೀಮತಿ.ಸುನಂದಾ ಕಡಮೆಯವರು ಇವರ ಬಾಳಸಂಗಾತಿ. ಇವರಿಬ್ಬರೂ ನಾಡಿನ ಪ್ರಮುಖ ಸಾಹಿತ್ಯ ಸ್ಪರ್ಧೆಗಳು ಹಾಗು ಪುಸ್ತಕ ಬಹುಮಾನಗಳಿಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಶ್ರಾವಣದ ಹಿತೈಶಿಗಳಾಗಿದ್ದಾರೆ. ಶ್ರೀ ಪ್ರಕಾಶ ಕಡಮೆಯವರು ನಮ್ಮ ಶ್ರಾವಣದ ಹೆಮ್ಮೆಯ ಗೌರವ ಸಲಹೆಗಾರರು.